ಶುಕ್ರವಾರ, ಡಿಸೆಂಬರ್ 4, 2009

..........................?















ಸಂಜೆ ತಂಪು ನವಿರಾದಗಾಳಿ,
ಮೈಸೋಕುತಿಹುದು ವರುಣನ ತುಂತುರು ಹನಿ,
ಮರೆಯಾದ ಹಕ್ಕಿಗಳ ಚಿಲಿಪಿಲಿ ಇಂದು ಕೇಳುತಿಹುದು,
ಆದರು ಗೆಳತಿ ನೀನಿಲ್ಲದ ಈ ಗಳಿಗೆ ನನಗೆ ಅಪರಿಪೂರ್ಣ,
ಇದು ಬರಿ ಕಾಗದದ ಅಕ್ಷರವಲ್ಲ ನನ್ನ ಮನದ ಇಂಗಿತ..............

ಸ್ವಾರ್ಥಿಗಳು

ಸ್ವಾರ್ಥಿಗಳು ಇವರು ಸ್ವಾರ್ಥಿಗಳು .
ಎಲ್ಲವು ಇವರಿಗಾಗಿ ಇವರದೇ ಎಲ್ಲವಯ್ಯ ,
ಇತರರ ಕೊಂಧು ತನ್ನವರ ಹಿಂಸಿಸಿ ,
ಸಂಗ್ರಯಿಸುವರಯ್ಯ ಹೊನ್ನು ಮಣ್ಣ ,
ಸ್ವಾರ್ಥಿಗಳಯ್ಯ ಇವರು ಸ್ವಾರ್ಥಿಗಳು.


ತನ್ ಸ್ವಾರ್ಥಕೆ ಹರಿಸುವರಯ್ಯ ನೆತ್ತರ ,
ಇವರಿಗೆ ಪ್ರೀತಿ ಪ್ರೇಮ ಗೆಳೆತನ ಎಲ್ಲೋ ಕೇಳಿದ ಪದಗಳು.
ಕಾಮ ಕ್ರೋದ ಮೋಹಗಳು ಇವರ ಒಡನಾಡಿಯಯ್ಯ,
ಸ್ವಾರ್ಥಿಗಳು ಇವರು ಸ್ವಾರ್ಥಿಗಳು .




ಹೆಂಗಳೆಯರು ಇವರ ಆಟಿಕೆಯು,
ಇವರು ನಮ್ಮನ್ನಾಳುವ ದೊರೆಗಳಯ್ಯ.
ಸ್ವಾರ್ಥವೇ ಇವರೋ ಇವರೇ ಸ್ವಾರ್ಥವ ನುನ್ಗಿಹರೋ ತಿಳಿಯದಯ್ಯ,
ಸ್ವಾರ್ಥಿಗಳು ಇವರು ಸ್ವಾರ್ಥಿಗಳು

ಗುರುವಾರ, ಸೆಪ್ಟೆಂಬರ್ 17, 2009

ತಂಗಾಳಿ, ನನ್ನವಳು


ತಂಗಾಳಿಯಲಿ ಮೀಯುವ ಬಾರೆ
ತುಂತುರು ಹನಿಯ ಹೊದ್ಹು
ಚಂದ್ರಮನ ಬೆಳಕಲಿ ನಲಿಯುವ ಬಾರೆ
ನಕ್ಷತ್ರ ಗಳ ಕದ್ದು
ಶೃಂಗಾರ ಸವಿಯ ಸವಿಯುವ ಬಾರೆ
ಲೋಕದ ಗೊಡವೆಯ ಒದ್ಧು

ದಿನ ನಿತ್ಯ ಒಂದಲ್ಲ ಒಂದು ಜಂಜಾಟ ತಲೆ ನೋವು ಕಿರಿ ಕಿರಿ
ಇದೆಲ್ಲ ಮರೆತು ಹಾಡೋಣ ಬನ್ನಿ ನೋಡಿ ಸ್ವಾಮಿ ನಾವಿರೋದೆ ಹೀಗೆ


ಮಂಗುನು