ಈಗ ಗೀಚತಿರೋದಕ್ಕೆ ಶೀರ್ಷಿಕೆ ಕೊಡಬೇಕೋ ಬೇಡವೋ ಗೊತ್ತಾಗಾತಿಲ್ಲ, ಗೊಂದಲದಲ್ಲಿದ್ದೀನಿ.
ಕೆಲವೊಂಧು ಘಟನೆ ಗಳು ಅಚ್ಚಳಿಯದೆ ಉಳಿದು ಬಿಡುತ್ತವೆ, ಅವತ್ತು ಕಛೇರಿಗೆ ರಜಾ ಇದ್ದ
ಕಾರಣ ಮನೆಯಲ್ಲಿ ಉಳಿದುಕೊಂಡಿದ್ದೆ , ಅವನು ಕೂಡ ನನ್ನ ಜೊತೆ ನಲ್ಲಿ ಇದ್ದ. ಅವನು ನನಗೆ ಒಬ್ಬ ಒಳ್ಳೆ
ಸ್ನೇಹಿತ ಕೂಡ. ಅವನಿಗೆ ಊಟ ಮಾಡಿಸಿದ್ದೆ , ಕೆಲವು ಕ್ಷಣ ನನ್ನಜೊತೆ ಆಟವಾಡಿ ನಂತರ ನನ್ನ ತೋಳ ಮೇಲೆ
ಮಲಗಿದ್ದ. ನಿದ್ರೆ ಇಂದ ಎದ್ದ ತಕ್ಷಣ ಸ್ನಾನ ಮಾಡಿಸಿ ಬಟ್ಟೆ ಹಾಕಿ ಹೊರಗೆ ಸುತ್ತಾಡಿ ಬರೋಣವೆಂದು ಹೇಳಿ
ಜೊತೆಯಲ್ಲಿ ಕರೆದು ಕೊಂಡು ಹೊರಟೆ, ತಕ್ಷಣ ಅವನು ಹೇಳಿದ ಮಾತು ನನ್ನ ಒಂದು ಕ್ಷಣ ಏನು ತೋಚದಂತೆ ಮಾಡಿತ್ತು.
ಅವನ ಪುಟ್ಟ ಬಾಯಿಂದ ಹೊರಟಿತ್ತು " ಅಪ್ಪ ನೀನು ಅಮ್ಮನಾ'? ಒಂದು ಕ್ಷಣ ತೋಚನೆ ಆಮೇಲೆ ಉತ್ತರಿಸಿದೆ "ನಾನು ಅಪ್ಪ ಕಣೋ",
ಅವನ ಪುಟ್ಟ ಬಾಯಲ್ಲಿ ಅದಕ್ಕೂ ಉತ್ತರ ತಯಾರಾಗಿತ್ತು, " ಇಲ್ಲ ನೀನು ಅಮ್ಮನೇ ". ಆ ಕ್ಷಣ ನನಗಾದ ಅನುಭವ ವಿವರಿಸೋಕೆ ಎಸ್ಟೆ ಪ್ರಯತ್ನ ಪಟ್ಟರು ಆಗತಿಲ್ಲಾ .. ಅಪ್ಪ ಯಾವತ್ತೂ ಅಮ್ಮ ಆಗೋಕೆ ಆಗೋಲ್ಲ ಅಂತಾರೆ, ಆದ್ರೆ ಅವನಿಗೆ ಆ ದಿನ ಅಮ್ಮನಾಗಿದ್ದೆ.
ಅಮ್ಮನ ಪ್ರೀತಿ ಅವನಿಗೆ ನನ್ನಿಂದ ಸಿಕ್ಕಿತ್ತು ಅನ್ನಸತ್ತೆ.
ಇದು ನನಗಾದ ಅನುಭವ.
ಅಪ್ಪ ಅಮ್ಮನಾದಾಗ............