..
ಶನಿವಾರ, ಜನವರಿ 25, 2014
ಅಲ್ಲಿ ಅವನು ಇದ್ದ,
ಅವಳು ಇದ್ದಳು,
ಕಂಗಳುತುಂಬಿದ್ದವು,
ಏನು ಉಳಿದಿರಲಿಲ್ಲ,
ಮೌನವೇ ಮಾತಾಗಿತ್ತು.
ತೆಗೆದ ನಿರ್ದಾರ
ಪದೇ ಪದೇ ಹಿಂಸಿಸುತ್ತಿ ತ್ತು,
ಕಂಪಿಸಿದ ದೇಹವೆರಡು ತಣ್ಣಗಾಗಿತ್ತು ,
ನೋಟಗಳು ಮಾತ್ರ ಒಂದಾಗಿದ್ದವು,
ಒಂದಾಗಿ ಮಣ್ಣಾಗಿದ್ದವು
ಗುರುವಾರ, ಏಪ್ರಿಲ್ 5, 2012
ನೋವು
ತನುವಿನ ನೋವು ಕ್ಷಣಿಕ ,
ಮನದ ನೋವು ಆಗೋಚರವಾದರೂ ಅಮರ.
ಮಂಗುನು
ಗುರುವಾರ, ಡಿಸೆಂಬರ್ 15, 2011
ಮಂಗುನು ಕಾವ್ಯ
ಕಾರ್ಯದಲ್ಲಿ ನೈಪುಣ್ಯತೆ ಮೆರೆದರೆ ಅತ್ಯಾಚಾರಿಯು ಮನ್ಮಥನೆ!
ಮಂಗುನು
ಬುಧವಾರ, ಏಪ್ರಿಲ್ 27, 2011
ನೀನ್ಯಾರು ?
ಮಾಡಿ ಮಲಗಿದೋರು,
ನೋಡಿ ತಿಳಿದೋರು ,
ತಿಳಿಯದೆ ಕುಂತೋರು ,
ತಿಳಿದು ಮಾಡದೋರು ,
ಇದ ಓದಿ ನಾನವನಲ್ಲ (
ನಾನವಳಲ್ಲ)
ಎಂದೋರು,
ಕೊನೆಗೆ ಏನೋ ನೆನಪಾಗಿ ತನ್ನಲ್ಲೇ ನಾನವನೆ(ನಾನವಳೇ) ಎಂದು ಮುಸಿ ಮುಸಿ ನಕ್ಕೊರು.
ಇದರಲ್ಲಿ ನೀನ್ಯಾರು ?
ಭಾನುವಾರ, ಏಪ್ರಿಲ್ 3, 2011
ಅಳಿಸಲಾದಿತೆ ?
ನೋಟದಿಂದ ದೂರಾದರು,
ಮಾತಿಲ್ಲದೆ ಮೌನವಾದರು,
ಎಲ್ಲೊ ಬರೆದ ಹಾಡು ಮರೆಯಾದರು,
ಮನದಲಿ ಮೂಡಿಧ ಚಿತ್ರ
ಅಳಿಸಲಾದಿತೆ?
ಗುರುವಾರ, ಮಾರ್ಚ್ 10, 2011
ಸರ್ವಜ್ಞ
ಹೆಣ್ಣು, ಅವಳೊಂದು ಮಾಯೆ.
ಆವರಿಸಿಕೊಂಡವನು ಹುಚ್ಚ,
ತಪ್ಪಿಸಿಕೊಂಡವನು ಜ್ಞಾನಿ,
ಸಂಪರ್ಕವೇ ಇಲ್ಲದವನು ಸರ್ವಜ್ಞ.
ಗುರುವಾರ, ಸೆಪ್ಟೆಂಬರ್ 9, 2010
ಬ್ರಮೆ
ಯಾರು ನಿನಗಾಗಿ ಇಲ್ಲ .
ಅವರವರ ಕಾಲಕ್ಕೆ ತಕ್ಕಂತೆ ಅವರವರ ಬದುಕು ,
ನಿನ್ನವರು, ಅದು ನಿನ್ನ ಬ್ರಮೆ ಮಾತ್ರ,
ಯಾರು ಯಾರಿಗಾಗಿಯೂ ಇಲ್ಲ. ತೊರೆಯ ಬೇಕು ಬ್ರಮೆಯ ಬದುಕು.
ಬುಧವಾರ, ಆಗಸ್ಟ್ 11, 2010
ಚಿಂತೆ
ಚಿಂತೆ ಬೇಡ ಮನುಜ,
ಚಿಂತೆಯು ಚಿತೆಯಲ್ಲಿ ಮಲಗಿದಂತೆ,
ಸುಡುವುದು ನಿನ್ನನ್ನೇ ಚಿಂತೆ ಮರೆತು ಹೊರಬಾ,
ಚಿಂತಿಸುವರ ಸಂತೈಸು ಇದೆ ಲೋಕಕ್ಕೆ ನಿನ್ನ ಕೊಡುಗೆ,ಮನಶಾಂತಿಗೆ ದಾರಿ.
ಗುರುವಾರ, ಜೂನ್ 3, 2010
ನೆರಳು
ಅವಳೋಂದು ಮರೀಚಿಕೆ,
ಸಮೀಪಿಸಿದರೆ ಮತ್ತಸ್ಟು ದೂರ,
ಬಳಿ ಬಂದು ಮನದಲಿ ನರ್ತಿಸಿದ ಅವಳು,
ನನಗಿಂದು ಕಾಡುವ ಕಪ್ಪು ನೆರಳು.
ಇತ್ತು ನಮ್ಮದೊಂದು ಕನಸಿನ ಲೋಕ,
ಅಲ್ಲಿ ಯಾರು ಕಾಣ ಸಿಗರು,
ಕಂಡಲ್ಲೆಲ್ಲ ಬರಿ ನಾನು ಅವಳೇ.
ಕನಸೆಲ್ಲ ಮರೆಯಾಯ್ತು ಕಾರ್ಮೋಡ ಕರಗಿದಂತೆ,
ಅವಳು ನನಗಿಂದು ಕಾಡುವ ಕಪ್ಪು ನೆರಳು.
ಶನಿವಾರ, ಫೆಬ್ರವರಿ 27, 2010
ಮಾಗಿ ಚಳಿ
ಮಾಗಿ ಚಳಿಯಾಗ ............
ಚಳಿಯೋಡಸೋ ಆಟವಾಡಿ,
ಒಂದಾಗೋಣ ಬಾರೆ ಗೆಳತಿ
ನನ್ನೊಳಗೆ ನೀನಾಗಿ.......
ನಿನ್ನೊಳಗೆ ನಾನಾಗಿ ......
ನಮ್ಮಿಬ್ರ ನಾವ್ ಮರೆಯೋಣ ಬಾರೆ ಗೆಳತಿ,
ಚಳಿಯಾಗ ಬೆವರಿಲ್ಸಿ .........
ತುಟಿಗೆ ತುಟಿಯೋರ್ಸಿ .........
ತಗ್ಗುಬ್ಬ ಆಳೆಯೋಣ ಬಾರೆ ಗೆಳತಿ.
ಶುಕ್ರವಾರ, ಜನವರಿ 29, 2010
ಒಂಟಿ
ಒಂಟಿತನವಿದು ಬಲು ಬಾರ,
ಅವನಿದ್ದ ಕಣ್ಣೆದುರು ಆ ದಿನಗಳೇಸ್ಟುಮಧುರ,
ಹಂಬಲಿಸುತಿದೆ ಮನುವು ಅವನ ಸನಿಹವ,ಹಂಬಲಿಸಿತಿದೆ ಮನುವು ಅವನ ಸನಿಹವ
ವೃಕ್ಷವೇ ನಿನ್ನ ಬಳಿ ಬಂದರೆ ಅವನಿಗೆ ತಿಳಿಸುವೆಯ?
ಗೆಳೆಯ
ಹಾಳೆ ಹರಿದರೆನಂತೆ,
ನಿನ್ನ ಮನುವು ಎನಗೆ ಅರಿಯದೇನು,
ಮನ ಬಿಚ್ಚಿ ತೋರದಿದ್ದರೇನು ನೋಟವದು,
ಸಾರಿ ಹೇಳುತಿದೆ ಗೆಳೆಯ ನೀ ನನ್ನವನು ನೀ ನನ್ನವನು.
ಶುಕ್ರವಾರ, ಡಿಸೆಂಬರ್ 4, 2009
..........................?
ಸಂಜೆ ತಂಪು ನವಿರಾದಗಾಳಿ,
ಮೈಸೋಕುತಿಹುದು ವರುಣನ ತುಂತುರು ಹನಿ,
ಮರೆಯಾದ ಹಕ್ಕಿಗಳ ಚಿಲಿಪಿಲಿ ಇಂದು ಕೇಳುತಿಹುದು,
ಆದರು ಗೆಳತಿ ನೀನಿಲ್ಲದ ಈ ಗಳಿಗೆ ನನಗೆ ಅಪರಿಪೂರ್ಣ,
ಇದು ಬರಿ ಕಾಗದದ ಅಕ್ಷರವಲ್ಲ ನನ್ನ ಮನದ ಇಂಗಿತ..............
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)