ಸೋಮವಾರ, ಮೇ 4, 2015



  ಈಗ ಗೀಚತಿರೋದಕ್ಕೆ ಶೀರ್ಷಿಕೆ ಕೊಡಬೇಕೋ ಬೇಡವೋ ಗೊತ್ತಾಗಾತಿಲ್ಲ, ಗೊಂದಲದಲ್ಲಿದ್ದೀನಿ.

  ಕೆಲವೊಂಧು ಘಟನೆ ಗಳು  ಅಚ್ಚಳಿಯದೆ ಉಳಿದು ಬಿಡುತ್ತವೆ, ಅವತ್ತು ಕಛೇರಿಗೆ ರಜಾ ಇದ್ದ

  ಕಾರಣ ಮನೆಯಲ್ಲಿ ಉಳಿದುಕೊಂಡಿದ್ದೆ , ಅವನು ಕೂಡ ನನ್ನ ಜೊತೆ ನಲ್ಲಿ ಇದ್ದ. ಅವನು ನನಗೆ ಒಬ್ಬ ಒಳ್ಳೆ

  ಸ್ನೇಹಿತ ಕೂಡ.  ಅವನಿಗೆ ಊಟ ಮಾಡಿಸಿದ್ದೆ , ಕೆಲವು ಕ್ಷಣ ನನ್ನಜೊತೆ ಆಟವಾಡಿ  ನಂತರ ನನ್ನ ತೋಳ ಮೇಲೆ

  ಮಲಗಿದ್ದ. ನಿದ್ರೆ ಇಂದ ಎದ್ದ ತಕ್ಷಣ ಸ್ನಾನ ಮಾಡಿಸಿ ಬಟ್ಟೆ ಹಾಕಿ ಹೊರಗೆ ಸುತ್ತಾಡಿ ಬರೋಣವೆಂದು ಹೇಳಿ


 ಜೊತೆಯಲ್ಲಿ ಕರೆದು ಕೊಂಡು ಹೊರಟೆ, ತಕ್ಷಣ ಅವನು ಹೇಳಿದ ಮಾತು ನನ್ನ ಒಂದು ಕ್ಷಣ ಏನು ತೋಚದಂತೆ  ಮಾಡಿತ್ತು.


  ಅವನ ಪುಟ್ಟ ಬಾಯಿಂದ  ಹೊರಟಿತ್ತು " ಅಪ್ಪ ನೀನು ಅಮ್ಮನಾ'?  ಒಂದು ಕ್ಷಣ ತೋಚನೆ ಆಮೇಲೆ ಉತ್ತರಿಸಿದೆ "ನಾನು ಅಪ್ಪ    ಕಣೋ",

  ಅವನ ಪುಟ್ಟ ಬಾಯಲ್ಲಿ ಅದಕ್ಕೂ ಉತ್ತರ ತಯಾರಾಗಿತ್ತು,   " ಇಲ್ಲ ನೀನು ಅಮ್ಮನೇ ".   ಆ ಕ್ಷಣ ನನಗಾದ ಅನುಭವ ವಿವರಿಸೋಕೆ   ಎಸ್ಟೆ ಪ್ರಯತ್ನ ಪಟ್ಟರು ಆಗತಿಲ್ಲಾ .. ಅಪ್ಪ ಯಾವತ್ತೂ ಅಮ್ಮ ಆಗೋಕೆ ಆಗೋಲ್ಲ ಅಂತಾರೆ, ಆದ್ರೆ ಅವನಿಗೆ ಆ ದಿನ ಅಮ್ಮನಾಗಿದ್ದೆ.


  ಅಮ್ಮನ ಪ್ರೀತಿ ಅವನಿಗೆ ನನ್ನಿಂದ ಸಿಕ್ಕಿತ್ತು ಅನ್ನಸತ್ತೆ.

  ಇದು ನನಗಾದ  ಅನುಭವ.



                         ಅಪ್ಪ ಅಮ್ಮನಾದಾಗ............

ಮಂಗಳವಾರ, ಏಪ್ರಿಲ್ 28, 2015



               

 ನಿಶ್ಯಬ್ಧ ಇರುಳು,
 ಸುಡುತಿಹುದು  ಒಡಲು,
 ಕಂಪಿಸುತಿದೆ  ದೇಹ,
 ಸೇರಲೇಕಿನ್ನು ತವಕ ,
 ಸವಿ ಬಾರೋ ಇನಿಯ ಎನ್ನೀ ನವರಂದ್ರಗಳ ಪುಳಕ.
          

                                                ಮಂಗುನು

ಗುರುವಾರ, ಏಪ್ರಿಲ್ 23, 2015

ಹೆಜ್ಜೆ ಗುರುತು


 
                        ಹೆಜ್ಜೆ ಗುರುತು

ಅವಳೆಜ್ಜೆ ಗುರುತಿನ ಪಕ್ಕದಲಿ ನಡೆದು ಕುಣಿದಿದ್ದೇ,
ಪ್ರೀತಿಯ ಹೇಳದೆ ವರುಷಗಳೇ ಕಳೆದಿದ್ದೆ,
ಅವಳಿಲ್ಲದ ದಿನ ಹೆಜ್ಜೆಗುರುತ ಹುಡುಕಿ ಅತ್ತಿದ್ದೆ,
ಅವಳು ಬಾರದಾದಾಗ ಅವಳೆಜ್ಜೆಗೆ ಮುತ್ತಿಟ್ಟ ಅಲೆಯಾಗಲು  ಸಾಗರಕ್ಕೆ ದುಮುಕಿದ್ದೆ...........
                                                                                                           ಮಂಗುನು

ಮಂಗಳವಾರ, ಏಪ್ರಿಲ್ 21, 2015


                                   NGO ಮೇಡಮ್ ಲೈಫ್ ನಲ್ಲಿ ಹೀಗೊಂದು ದಿನ ..!

ನಿಮಗೆಲ್ಲ ಗೊತ್ತಿರಬೇಕು ದೂರದರ್ಶನ ಅಥವಾ ಬಾನುಲಿ ನಲ್ಲಿ ಕೇಳಿರ್ತೀರಾ ಎನ್ ಜಿ ಅನ್ನೋ ಆಂಗ್ಲ ಪದ. ಸಂಸ್ಥೆ  ಸ್ವಯಂ ಪ್ರೇರಿತರಾಗಿ ಸಮಾಜ ಕಲ್ಯಾಣದಲ್ಲಿ ತೊಡಗಿರ್ತಾರೆ. ಮಹಿಳೆಯರಿಗೆ ಮಕ್ಕಳಿಗೆ ತುಂಬ ಸಹಾಯ ಮಾಡತಾರೆ ಕೂಡ.

ಹೀಗೆ ಒಬ್ಬ ಪ್ರತಿಭಾನ್ವಿತ ಮಹಿಳೆ ವಿದೇಶದಲ್ಲಿ ವ್ಯಾಸಂಗ ಮುಗಿಸಿ ಸಮಾಜ ಕಲ್ಯಾಣದಲ್ಲಿ ತಮನ್ನ ತೊಡಗಿಸಿಕೊಳ್ಳೋಕೆ ಎನ್ ಜಿ ಸಂಸ್ಥೆ ಶುರು ಮಾಡಿದ್ರು.

ಮಹಿಳೆಯರಿಗೆ ಸಹಾಯ ಮಾಡೋ ಉದ್ದೇಶ ಅವರದಾಗಿತ್ತು, ಹೀಗೆ ಅವರು ಗ್ರಾಮೀಣ ಮಹಿಳೆಯರಿಗೆ ಏನಾದ್ರೂ ಸಹಾಯ  ಮಾಡ ಬೇಕು ಅಂತ  ಗ್ರಾಮ ವಾಸ್ತವ್ಯಕ್ಕೆ ಹೊರಟು ನಿಂತರು. ಅವರ ಜೊತೆ ಬೆರೆತು ನೋಡಿದ್ರೆ ಹೆಚ್ಚಾಗಿ ತಿಳಿ ಬಹುದು ಅನ್ನೋದು ಅವರ ವಾದ.

 ಒಂದು  ದಿನ  ಕುಗ್ರಾಮ ಒಂದನ್ನ ಆರಿಸ್ಕೊಂಡು ತಮ್ಮ ಪರಿಕರ ಗಳನ್ನ ತೆಗೆದುಕೊಂಡು  ಹೊರಟು ನಿಂತರು. ಕುಗ್ರಾಮದಲ್ಲಿ ಇವರಿಗೆ ಕಂಡವಳೆ ಸಣಕಲು ದೇಹದ ಸಣ್ಣಮ್ಮ.

 NGO ಮೇಡಮ್ -- ಸಣ್ಣಮ್ಮ ಹೇಗಿದ್ದೀರ ಜೀವನ ಹೇಗೆ ನಡೀತಿದೆ ನಾನು ಹಳ್ಳಿ ಹೆಣ್ಣು ಮಕ್ಕಳ ಬಗ್ಗೆ ಸ್ಟಡೀ ಮಾಡೋಕೆ ಬಂದಿದೀನಿ. ನಿಮ್ಮನೆನಲ್ಲಿ ಸ್ವಲ್ಪ ದಿನ  ಇರತೀನಿ ನಿಮ್ಮ ಯೆಜಮಾನ್ರೀಗೂ ತಿಳಿಸಿದ್ದೀನಿ.

ಸಣ್ಣಮ್ಮ -" ಅದೇನು ಬುಡ್ರಿ ಮಾಡಮ್ಮೋರ್ರೆ ಮನೆಲಿ ಅಸ್ಟೊಂದು ದನ ಎಮ್ಮೆ ಎಲ್ಲ ಅವೇ ನೀವು ಇದ್ದಕಳಿ. ನನಗೂ ಕೂಸಿನೆಯ".  

 ಸಣ್ಣಮ್ಮ ಶ್ರಮಜೀವಿ ಅವಳ ಜೀವನ ನೋಡಿ NGO ಮೇಡಮ್ ಅವರ ಕಣ್ಣು ತುಂಬಿ ಬಂದಿತ್ತು. ದಿನ ನಿತ್ಯ ದನ, ಕುರಿ, ಗಂಡ ಮಕ್ಕಳ ಪೋಷಣೆ, ಹೊಲ ಗದ್ದೆಯ ಕೆಲಸ ನೋಡಿ ಸಣ್ಣಮ್ಮಳ ಮೇಲೆ ತುಂಬ ಕನಿಕರ ಮೂಡಿತ್ತು. ತಬ್ಭಿ ಕೊಂಡು ಆತ್ತಿದ್ದರು ಕೂಡ.

ಸಣ್ಣಮ್ಮ - " ಇದೇನು ಬುಡ್ರೀ  ಮ್ಯಾಡಮ್ಮೊರೆ  ಯಾಕ್ ಹಿಂಗಳತೀರಿ ನಿಮ್ಮವ್ವನ ತಾವಲೋ ನಿಮ್ಮ ಅಪ್ಪಂಥವಲೋ ಫೋನ್ ಮಾಡಿ ಮಾತಾಡಿ ಅವ್ವ ಜ್ಞಾಪಕಾಗಿರ್ಬೇಕು."

ಸಣ್ಣಮ್ಮಳ ಮುಘ್ಧ ಮನಸನ್ನ ನೋಡಿ NGO ಮೇಡಮ್ ಇನ್ನೂ ಬಿಕ್ಕಿ ಬಿಕ್ಕಿ ಅತ್ತಿದ್ದರು. ಹೆಣ್ಣು ಮಗಳಿಗೆ  ಏನಾದ್ರೂ  ನನ್ನ ಕೈಲಾದ ಸಹಾಯ  ಮಾಡಲೇ ಬೇಕು ಅನ್ನಕೊಂಡ್ರು.

 ಹೀಗ್ ಒಂದಿನ ರಾತ್ರಿ NGO ಮೇಡಮ್ ನಿದ್ರೆ ಬಾರದೆ  ಪಡಸಾಲೆ ನಲ್ಲಿ ಒರಲಡತ ಮಲಗಿದ್ರು. ಸುಮಾರು ಮಧ್ಯ ರಾತ್ರಿ ಸಮಯ.   ಸಣ್ಣಮ್ಮಳ ಕೋಣೆ ಇಂದ ಕಿರುಚಾಡೂ ಶಬ್ಧ ಕೇಳಿಸ್ತಿತ್ತು , NGO ಮೇಡಮ್ ಒಂಧು ಕ್ಷಣ ಗಾಬರಿಯಾದರು.
  
ಸಣ್ಣಮ್ಮ -- ಯವ್ವೋ, ಯಪ್ಪೋ,........ ಕಾಲು ಮುರಿತಲ್ಲೋ ಅಂತ, ಕೊನೆಗೆ     ಕೆಟ್ಟ್ನಲ್ಲೋಯಪ್ಪೋ ಅಂತ ಚೀರಿ ಸುಮ್ಮನಾಗಿದ್ದಳು.

NGO ಮೇಡಮ್ಮೂ ಹೆದರಿದ್ರು ಏನು  ಮಾಡೋಕೆ ತೋಚದೆ ರಾತ್ರಿ ಎಲ್ಲ ನಿದ್ರೆ ಮಾಡದೆ ಒರಳಾಡಿದರು.

ಸಣ್ಣಮ್ಮ ಬೆಳಿಗ್ಗೆ ಕೋಣೆ ಇಂದ ಹೊರ ಬರತಿದ್ದಂತೆ NGO ಮೇಡಮ್ ನೋಡಿದ್ರು ಮುಕ ಊದಿತ್ತು, ನಡಿಯೋ ಭಂಗಿ ಕೂಡ ಬದಲಾಗಿತ್ತು, ಕಣ್ಣು ಕೆಂಪಗಾಗಿತ್ತು.  NGO ಮೇಡಮ್ ಅವರಿಗೆ ಕೋಪ ತಡಿ ನಾರದೆ  ಸಣ್ಣಮ್ಮಳ ಗಂಡನ ಕಪಾಳ ಮೋಕ್ಷ ಮಾಡಿದ್ರು.

ತಕ್ಷಣ ಪೊಲೀಸರಿಗೆ  ಕರೆ ಮಾಡಿ ಅವನ ಮೇಲೆ ಮಾನಸಿಕ, ಹಾಗೂ ದೈಹಿಕ ಹಿಂಸೆ ಕೇಸ್ ನೊಂಧಾಯಿಸಿದರು , ಪೋಲೀಸ್ ನೇರ ಬಂದು ಅವನನ್ನು ಬಂಧಿಸಿ ಬಿಟ್ಟರು. ಏನು ತಿಳಿಯದೆ ಸಣ್ಣಮ್ಮ ಪೇಚು ಮೊರೆ ಹಾಕಿ  ನಿಂತಿದ್ದಳು....

  ವಿಷಯ ಸುತ್ತಮುತ್ತಲ ಹಳ್ಳಿಗೆಲ್ಲ ಹಬ್ಬಿತ್ತು. ಪೋಲೀಸ್ ಸಣ್ಣಮ್ಮಳ ಹೇಳಿಕೆ ಪಡೆಯೊಕೆ ಕರೆಸಿದ್ರು , NGO ಮೇಡಮ್ - ಸಣ್ಣಮ್ಮ ಹೇಳು ದಿನ ರಾತ್ರಿ ಹೇಗೆಲ್ಲಾ ಹಿಂಸೆಪಟ್ಟೆ , ಕಾಲು ಮುರಿಧೊದ ವಿಷಯ ಎಲ್ಲ ಹೇಳು……………….

ಸಣ್ಣಮ್ಮಳ ಯಾವುದೇ ಪ್ರತ್ಯುತ್ತರ ಇರಲಿಲ್ಲ, ಅದೇ  ಪೇಚು ಮೊರೆಕೊನೆಗೆ NGO ಮೇಡಮ್ ಹೇಳಿಕೆ ತೆಗೆದು ಕೊಂಡು FIR ಕೂಡ ಆಯತು

ಕೇಸ್ ನ್ಯಾಲಯದ ವಿಚಾರಣೆಗೆ ಬಂತು NGO ಮೇಡಮ್ ಸಣ್ಣಮ್ಮ ಕಿರುಚಿದ ಪರಿ.ಆದಿನ ನಡೆದ ಘಟನೆಯನ್ನ್  ಹಾಗೆ ಜಡ್ಜ್ ಮುಂದೆ ವಿವರಿಸಿದರುಅಲ್ಲೇ ಕುಳಿತಿದ್ದ ಮಹಿಳಾ ವಕೀಲೆಯೊಬ್ಬರು ಸಂದೇಹದಿಂದ ಜಡ್ಜ್ ಬಳಿ ಕಾಲಾವಕಾಶ ಕೋರಿದರು.

NGO ಮೇಡಮ್ವರಿಗೆ ಎಲ್ಲಿಲ್ಲದ ಕೋಪ ವಕೀಲೆ ಮೇಲೆ. ಸಣ್ಣಮ್ಮಳ ಜೊತೆ  ವಕೀಲೆಯ ಕಚೇರಿಗೆ ಬಂದ ಮೇಡಮ್  ಯಾಕೆ ಟೈಮ್ ಕೇಳಿದ್ರಿ,ಅವನಿಗೆ ಶಿಕ್ಷೆ ಆಗಲೇ ಬೇಕು? ವಕೀಲೆ ಸಣ್ಣಮ್ಮಳನ್ನ ಕರೆದು  ವಿಚಾರಿಸಿ, ನಂತರ ……….

NGO ಮೇಡಮ್  ನೀವು ದುಡುಕಿ ಬಿಟ್ರಿ   ಹಳ್ಳಿ ಹೆಣ್ಣು ಮಕ್ಕಳಿಗೆ ಹಾ ಹ್ಮ್ಮ್ಮ್ಮ್ಮ್  ಯ್ಯಾ ಫ್ ..... ಮೀ ಗಾಡ್ ಅಂತೆಲ್ಲ ಚೀರಿ ಎಂಜಾಯ್ ಮಾಡೋಕೆ ಬರೋಲ್ಲ ಅವರು ಅದನ್ನು  ಎಂಜಾಯ್ ಮಾಡೋದೇ  ಹೀಗೆ .... ಮೇಡಮ್ ಗೆ ಏನು ಹೇಳೋದುಗೊತ್ತಾಗಲಿಲ್ಲ , ಮತ್ತೆ ಅವತ್ತು ಅವಳು ಕಾಲು ಮುರಿತು ಅಂಧಿದ್ದು? ಆವುದು ಆದಿನ ಕಾಲು ಮುರಿದಿದ್ದು ನಿಜ ಆದರೆ ಅವಳದಲ್ಲ ಮಂಚದ್ದು..  ಸಣ್ಣಮ್ಮಳ ಮುಖ ನೋಡಿದ್ರು NGO ಮೇಡಮ್ , ಸಣ್ಣಮ್ಮ ಅವದು ಅಂತ ನಾಚಿ ತಲೆ ಬಗ್ಗಿಸಿದ್ದಳು .............



ಮೇಡಮ್ ಕೇಸ್ ವಾಪಸ್ಸು ತಗೊಂಡ್ರು ಗ್ರಾಮ ವಾಸ್ತವ್ಯ ಬಿಟ್ಟು NGO ಕಛೇರಿ ಮುಚ್ಚಿ ಕಣ್ಮರೆ. ಯಾದರು................

ಲೈಫ್ ಸ್ಟೈಲು


                               
                                                   

        ಎಲ್ಲೋ ಹೇಳೋದು ಕೇಳಿದ್ದೆ   ಬದುಕು ನಶ್ವರ ಅಂತ, ಅದನ್ನ ಕೇಳಿದಾಗೆಲ್ಲ ಅನ್ನ್ನಿಸತಿತ್ತು ಯಾರೋ ಬದುಕಲು ಬಾರದ ಜೀವನದ ಸುಖ ಅನುಭವಿಸಲು ಬಾರದವರು ಹೇಳಿದ ಮಾತಿರಬೇಕು ಅಂತ. ಯಾಕಾದರೂ ಅವರೀಗೆ ಹೀಗೆ ಅನ್ನಿಸ್ಸಿತೋ ಕೂತು ಯೋಚಿಸ್ತಿದ್ದೆ ......

     ಎಲ್ಲಿ ನೋಡಿದರು ಬಣ್ಣಗಳೇ ಕಾಣೋ ವಯಸ್ಸು, ಕಾಣೊದೆಲ್ಲ ಎಲ್ಲೋ ಕನಸಲ್ಲಿ ಕಂಡದ್ದು ಕಣ್ಣ್ ಮುಂದೆ ಬಂದಂತೆ ಭಾಸವಾಗೊ ದಿನಗಳು, ದಿನ ಕಳೆದಂತೆಲ್ಲ ಇನ್ನೂ ಹೆಚ್ಚ್ಚಾಗೋ ಕನಸುಗಳು.......        ಕ್ಷಣಗಳನ್ನ ಅನುಭವಿಸಿ ಬಂದ ಪ್ರತಿಯೊಬ್ಬ ವ್ಯಕ್ತಿನೂ ಕಂಡಿತ ಒಪ್ಪಕೊತಾನೆ ಅಲ್ವ್ ?   ಎಲ್ಲೋ ಓಧಿದ ಗೋಡೆ  ಬರಹ ಯಾರೋ ಗಡ್ಡಧಾರಿ ಹೇಳಿದ ಮಾತು ಮನಸ್ಸು ಒಪ್ಪಿದರು ಅದಕ್ಕೆ ವಿರುದ್ದವಾಗಿ ನಡಿಯೋ ಜೀವನ ಎಷ್ಟು ವಿಚಿತ್ರ.

ಈಗೇನೋ ಹೊಸ ಜೀವನದಲ್ಲಿ ಹೊಸ ಪದ ಬೇರೆ ಬಳಸ್ತಾರೆ ಎಲ್ಲಿಂದಲೋ ಕದ್ದು ತಂದ "ಲೈಫ್ ಸ್ಟೈಲು". ಅದರಿಂದ ಅವರು ಪಡೆದಿದ್ಧಾರು ಏನುಅವರೇ ದೀಪ ಹಚ್ಚಿ ಹುಡುಕಿದರೂ ಲೈಫು ಇರೋಲ್ಲ ಸ್ಟೈಲು ಇರೋಲ್ಲಹಾಗಿದ್ರೂ ಕೂಡ ಲೈಫ್ ನಲ್ಲಿ ಸ್ಟೈಲ್ ಹುಡುಕ್ತಾನೇ ಇರತಾರೆ.

ಹೀಗೆ ಕನಸು ಕಾಣೋ ಮಹಾನ್ ವ್ಯಕ್ತಿಗಳು ದಿನನಿತ್ಯ ಕಾಣತಾನೇ ಇರತಾರೆ, ಹೀಗೆ ನಾನು ಕಂಡಂತೆ ಹೇಳತಿದಿನಿ .

 ಜೀವನವನ್ನ ಅಲ್ಪ  ಸ್ವಲ್ಪ  ತಿಳಿದಮೇಲೆ ಯಾರೋ ಗಡ್ಡಧಾರಿ ಹೇಳಿದ ಮಾತು ಗೋಡೆ ಬರಹ ಎಲ್ಲ ಸರಿ ಅದೇ ಬದುಕು ಅನ್ನಿಸೋಕೆ ಶುರುವಾಗಿತ್ತು, ಜೀವನದಲ್ಲಿ ಯಾರು ಯಾರಿಗಾಗಿಯೂ ಅಲ್ಲಾ ಅವರವರ ಕಾಲಕ್ಕೆ ತಕ್ಕಂತೆ ಅವರವರ ಬದುಕು ಅಂತ ಒಪ್ಪಿದ್ದಾಗಿತ್ತು . ಕಾರಣ ಸಾಕಷ್ಟು ಅನುಭವಗಳು.

ಜೀವನ ರೀತಿ ಬದಲಾಗೋಕೆ ಕಾರಣನಾದ್ರೂ ಏನು ಅಂತ ಹುಡುಕ್ತಾ ಹೋದರೆ ತಮ್ಮ ಗುಂಡಿ ತಾವೇ ತೋಡಿ ಮುಂದೆ ನಿಂತು ಹೆಲೋ ಅಂತ ಹಲ್ಲು ಕಿರಿಯೋ ಮುಖಗಳು ಕಣ್ಣ್ ಮುಂದೆ ಬರತಾವೆ.... ಯಾಕಪ್ಪಾ ಹೀಗಾದ್ರು ಅಂಧ್ರೆ  ಸಿಕ್ಕಿದ್ದು  ಅದೇ ಉತ್ತರ  ಲೈಫ್ ಸ್ಟೈಲು .


ಇದರ ಬಾಲ ಇಡಿದು ಹೋದವರು ಹುಡುಕುತಿದ್ರು  ತಮ್ಮ ಪುತ್ರಿಗೆ ವರಜಾಹೀರಾತು ನೀಡಿದ್ರು ಡಾಕ್ಟರ್, ಇಂಜಿನಿಯರ್ ಅದರಲ್ಲೂ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಲಿ ಇನ್ನೂ ಉತ್ತಮ, ಹೀಗೆ ಬಹಳಷ್ಟು ಬೇಡಿಕೆ ಮುಂದಿಟ್ಟು ಕೊನೆಯಲ್ಲಿ ಹಾಕಿಸಿದ್ರು "ಹುಡುಗ ಯೋಗ್ಯ ನಾಗಿರ ಬೇಕು". ಇದು ಇವರು ಕಂಡುಕೊಂಡ ಲೈಫ್ ಸ್ಟೈಲುಹುಡುಕ ಯೋಗ್ಯನಾಗಿರೋದಕಿನ್ನ  ಮುಂಚೆ ಡಾಕ್ಟರ್ ಅಥವಾ ಇಂಜಿನಿಯರ್ ಆಗಿರಬೇಕು.

ಪಾಪ ಜಾಹೀರಾತು ಓದಿದವರು ಯಾರು ಕೊನೆ ಸಾಲು ಓದತಾರೆ ಹೇಳಿ ? ರೀ  ಇಲ್ಲಿ ನೋಡ್ರಿ ಡಾಕ್ಟರ್ ವರ ಬೇಕಂತೆ, ಇಂಜಿನಿಯರ್ ಬೇಕಂತೆ ಇಷ್ಟೇ ವಿಚಾರ.
ಹೆಣ್ಣನ್ನು ನೋಡಿ ಆಯ್ತು, ಮಧುವೇನು ಆಯ್ತು, ಹುಡುಗಿಗೆ ಇಂಜಿನಿಯರ್ ಸಿಕ್ಕಿದ್ದ, ಕೊನೆಯಲ್ಲಿ  ಹಾಕಿದ್ದ ಜಾಹೀರಾತಿನ ಸಾಲು ಮಾತ್ರ ಅವನಿಗೆ ವಿರುದ್ದವಾಗಿತ್ತು.

      ಹೀಗೆ ಬಾಳ ಸಂಗಾತಿಯನ್ನ ಹುಡುಕುತಿದ್ದ ಹುಡುಗ ನನಗಾದರೂ ಯಾರಿದ್ದಾರೆ ಸಂಗಾತಿಯೊಬ್ಬಳು ಸಿಕ್ಕರೆ ಸಾಕು ಅನ್ನೋದು ಅವನ ಯೋಚನೆಯಾಗಿತ್ತು, ಅದರಂತೆ ವರಿಸಿದ್ದ ಸುಂದರಿಯೊಬ್ಬಳನ್ನುಯವ್ವನದಲ್ಲಿ ಸುಂದರವಾಗಿ ಕಂಡಿರಬೇಕು ಬಿಡಿ.

ದಿನ ಕಳೆದಂತೆ ಅವನಿಗೆ ಅನ್ನಿಸಿದ್ದು ನಾ ಹುಡುಕಿದ್ದು ಬಾಳ  ಸಂಗಾತಿಯನ್ನಲ್ಲ ಒಂದು ಕೆಲಸವನ್ನ, ಅವನಿಗೆ ಬೇಕಾಗಿದ್ದು ಸಂಗಾತಿ ಅವಳಿಗೆ ಬೇಕಿತ್ತು ಕೇರ್ ಟೇಕರ್. ದಿನ ಕಳೆದಂತೆ ಸಂಗಾತಿಯ ಬೇಕು ಬೇಡಗಳನ್ನ ಪೋರೈಸೋ ಯಂತ್ರವಾಗಿದ್ದ, ಪಾಪ ಅವಳಾದರು ಏನು ಮಾಡತಾಳೆ ಹೇಳಿ ಅವನು ಹುಟ್ಟಿರೋದೇ ನನಗೋಸ್ಕರ ಅನ್ನಕೊಂಡಿರತಾಳೆ!.
ಆದ್ರೂ ಅವಳು ಅವನ್ನ ತುಂಬ ಕೇರ್ ಮಾಡತಿದ್ದಳು,ಅವಳಿಗೆ ಬೇಕಿತ್ತು ಬದುಕಿರೋ ವರೆಗೂ ಒಬ್ಬ ಕೇರ್ ಟೇಕರ್.   ಆತ ಎಲ್ಲರ ಬಗ್ಗೆ ಯೋಚಿಸ್ತಿದ್ದ ಎಲ್ಲರೂ ಚೆನ್ನಾಗಿರಬೇಕು ಅಂತಿದ್ದ ,ಆದರೆ ಅವನ ಬಗ್ಗೆ ಯೋಚನೆ ಮಾಡೋವ್ರು ಯಾರು ಹುಟ್ಟಿರಲಿಲ್ಲ...........

                                                                                                                                                  
                                                                                                                                                                                                                                                                                                      ಮಂಗುನು

ಶನಿವಾರ, ಜನವರಿ 25, 2014

                 
ಅಲ್ಲಿ  ಅವನು ಇದ್ದ,
ಅವಳು ಇದ್ದಳು,
ಕಂಗಳುತುಂಬಿದ್ದವು,
ಏನು ಉಳಿದಿರಲಿಲ್ಲ,
ಮೌನವೇ  ಮಾತಾಗಿತ್ತು.


ತೆಗೆದ ನಿರ್ದಾರ
ಪದೇ ಪದೇ ಹಿಂಸಿಸುತ್ತಿ ತ್ತು,
ಕಂಪಿಸಿದ  ದೇಹವೆರಡು ತಣ್ಣಗಾಗಿತ್ತು ,
ನೋಟಗಳು ಮಾತ್ರ ಒಂದಾಗಿದ್ದವು,
ಒಂದಾಗಿ ಮಣ್ಣಾಗಿದ್ದವು 

ಗುರುವಾರ, ಏಪ್ರಿಲ್ 5, 2012

                  ನೋವು


ತನುವಿನ ನೋವು ಕ್ಷಣಿಕ ,
ಮನದ  ನೋವು ಆಗೋಚರವಾದರೂ ಅಮರ.


                                                 
                                                            ಮಂಗುನು
            

ಗುರುವಾರ, ಡಿಸೆಂಬರ್ 15, 2011

                       ಮಂಗುನು ಕಾವ್ಯ


ಕಾರ್ಯದಲ್ಲಿ ನೈಪುಣ್ಯತೆ ಮೆರೆದರೆ ಅತ್ಯಾಚಾರಿಯು ಮನ್ಮಥನೆ!




                                                                               ಮಂಗುನು

ಬುಧವಾರ, ಏಪ್ರಿಲ್ 27, 2011

             



                                                                                         
                                                        


ನೀನ್ಯಾರು  ?

ಮಾಡಿ   ಮಲಗಿದೋರು,
ನೋಡಿ ತಿಳಿದೋರು ,
ತಿಳಿಯದೆ ಕುಂತೋರು ,
ತಿಳಿದು  ಮಾಡದೋರು ,
ಇದ ಓದಿ ನಾನವನಲ್ಲ (ನಾನವಳಲ್ಲ)   ಎಂದೋರು,
ಕೊನೆಗೆ ಏನೋ ನೆನಪಾಗಿ ತನ್ನಲ್ಲೇ ನಾನವನೆ(ನಾನವಳೇ) ಎಂದು  ಮುಸಿ ಮುಸಿ ನಕ್ಕೊರು.


ಇದರಲ್ಲಿ   ನೀನ್ಯಾರು   ? 


ಭಾನುವಾರ, ಏಪ್ರಿಲ್ 3, 2011

                ಅಳಿಸಲಾದಿತೆ ?   

ನೋಟದಿಂದ ದೂರಾದರು,
ಮಾತಿಲ್ಲದೆ ಮೌನವಾದರು,
ಎಲ್ಲೊ ಬರೆದ ಹಾಡು ಮರೆಯಾದರು,
ಮನದಲಿ ಮೂಡಿಧ ಚಿತ್ರ  ಅಳಿಸಲಾದಿತೆ?


ಗುರುವಾರ, ಮಾರ್ಚ್ 10, 2011

              ಸರ್ವಜ್ಞ                                      

ಹೆಣ್ಣು, ಅವಳೊಂದು ಮಾಯೆ.
ಆವರಿಸಿಕೊಂಡವನು ಹುಚ್ಚ,
ತಪ್ಪಿಸಿಕೊಂಡವನು  ಜ್ಞಾನಿ,
ಸಂಪರ್ಕವೇ ಇಲ್ಲದವನು ಸರ್ವಜ್ಞ.

ಗುರುವಾರ, ಸೆಪ್ಟೆಂಬರ್ 9, 2010

                           ಬ್ರಮೆ 
ಯಾರು ನಿನಗಾಗಿ ಇಲ್ಲ .
ಅವರವರ ಕಾಲಕ್ಕೆ ತಕ್ಕಂತೆ ಅವರವರ ಬದುಕು ,
ನಿನ್ನವರು, ಅದು ನಿನ್ನ ಬ್ರಮೆ ಮಾತ್ರ,
ಯಾರು ಯಾರಿಗಾಗಿಯೂ ಇಲ್ಲ.  ತೊರೆಯ ಬೇಕು ಬ್ರಮೆಯ ಬದುಕು.

ಬುಧವಾರ, ಆಗಸ್ಟ್ 11, 2010

                                         ಚಿಂತೆ

     ಚಿಂತೆ ಬೇಡ ಮನುಜ,
     ಚಿಂತೆಯು ಚಿತೆಯಲ್ಲಿ ಮಲಗಿದಂತೆ,
     ಸುಡುವುದು ನಿನ್ನನ್ನೇ  ಚಿಂತೆ ಮರೆತು ಹೊರಬಾ,
     ಚಿಂತಿಸುವರ ಸಂತೈಸು ಇದೆ ಲೋಕಕ್ಕೆ ನಿನ್ನ ಕೊಡುಗೆ,ಮನಶಾಂತಿಗೆ ದಾರಿ.