ಎಲ್ಲೋ ಹೇಳೋದು ಕೇಳಿದ್ದೆ ಬದುಕು
ನಶ್ವರ ಅಂತ, ಅದನ್ನ ಕೇಳಿದಾಗೆಲ್ಲ
ಅನ್ನ್ನಿಸತಿತ್ತು ಯಾರೋ ಬದುಕಲು ಬಾರದ
ಜೀವನದ ಸುಖ ಅನುಭವಿಸಲು ಬಾರದವರು
ಹೇಳಿದ ಮಾತಿರಬೇಕು ಅಂತ. ಯಾಕಾದರೂ ಅವರೀಗೆ
ಹೀಗೆ ಅನ್ನಿಸ್ಸಿತೋ ಕೂತು ಯೋಚಿಸ್ತಿದ್ದೆ ......
ಎಲ್ಲಿ ನೋಡಿದರು ಬಣ್ಣಗಳೇ
ಕಾಣೋ ವಯಸ್ಸು, ಕಾಣೊದೆಲ್ಲ ಎಲ್ಲೋ
ಕನಸಲ್ಲಿ ಕಂಡದ್ದು ಕಣ್ಣ್ ಮುಂದೆ
ಬಂದಂತೆ ಭಾಸವಾಗೊ ದಿನಗಳು, ದಿನ
ಕಳೆದಂತೆಲ್ಲ ಇನ್ನೂ ಹೆಚ್ಚ್ಚಾಗೋ ಕನಸುಗಳು....... ಆ ಕ್ಷಣಗಳನ್ನ ಅನುಭವಿಸಿ
ಬಂದ ಪ್ರತಿಯೊಬ್ಬ ವ್ಯಕ್ತಿನೂ ಕಂಡಿತ ಒಪ್ಪಕೊತಾನೆ ಅಲ್ವ್
? ಎಲ್ಲೋ
ಓಧಿದ ಗೋಡೆ ಬರಹ
ಯಾರೋ ಗಡ್ಡಧಾರಿ ಹೇಳಿದ ಮಾತು ಮನಸ್ಸು
ಒಪ್ಪಿದರು ಅದಕ್ಕೆ ವಿರುದ್ದವಾಗಿ ನಡಿಯೋ
ಜೀವನ ಎಷ್ಟು ವಿಚಿತ್ರ.
ಈಗೇನೋ ಹೊಸ ಜೀವನದಲ್ಲಿ ಹೊಸ
ಪದ ಬೇರೆ ಬಳಸ್ತಾರೆ ಎಲ್ಲಿಂದಲೋ
ಕದ್ದು ತಂದ "ಲೈಫ್ ಸ್ಟೈಲು". ಅದರಿಂದ
ಅವರು ಪಡೆದಿದ್ಧಾರು ಏನು ? ಅವರೇ
ದೀಪ ಹಚ್ಚಿ ಹುಡುಕಿದರೂ ಲೈಫು
ಇರೋಲ್ಲ ಸ್ಟೈಲು ಇರೋಲ್ಲ. ಹಾಗಿದ್ರೂ ಕೂಡ ಲೈಫ್ ನಲ್ಲಿ
ಸ್ಟೈಲ್ ಹುಡುಕ್ತಾನೇ ಇರತಾರೆ.
ಹೀಗೆ ಕನಸು ಕಾಣೋ ಮಹಾನ್
ವ್ಯಕ್ತಿಗಳು ದಿನನಿತ್ಯ ಕಾಣತಾನೇ ಇರತಾರೆ, ಹೀಗೆ
ನಾನು ಕಂಡಂತೆ ಹೇಳತಿದಿನಿ .
ಜೀವನವನ್ನ ಅಲ್ಪ ಸ್ವಲ್ಪ ತಿಳಿದಮೇಲೆ
ಯಾರೋ ಗಡ್ಡಧಾರಿ ಹೇಳಿದ ಮಾತು ಗೋಡೆ
ಬರಹ ಎಲ್ಲ ಸರಿ ಅದೇ
ಬದುಕು ಅನ್ನಿಸೋಕೆ ಶುರುವಾಗಿತ್ತು, ಈ ಜೀವನದಲ್ಲಿ ಯಾರು
ಯಾರಿಗಾಗಿಯೂ ಅಲ್ಲಾ ಅವರವರ ಕಾಲಕ್ಕೆ
ತಕ್ಕಂತೆ ಅವರವರ ಬದುಕು ಅಂತ
ಒಪ್ಪಿದ್ದಾಗಿತ್ತು . ಕಾರಣ ಸಾಕಷ್ಟು ಅನುಭವಗಳು.
ಜೀವನ ಈ ರೀತಿ ಬದಲಾಗೋಕೆ
ಕಾರಣನಾದ್ರೂ ಏನು ಅಂತ ಹುಡುಕ್ತಾ
ಹೋದರೆ ತಮ್ಮ ಗುಂಡಿ ತಾವೇ
ತೋಡಿ ಮುಂದೆ ನಿಂತು ಹೆಲೋ
ಅಂತ ಹಲ್ಲು ಕಿರಿಯೋ ಮುಖಗಳು
ಕಣ್ಣ್ ಮುಂದೆ ಬರತಾವೆ.... ಯಾಕಪ್ಪಾ
ಹೀಗಾದ್ರು ಅಂಧ್ರೆ ಸಿಕ್ಕಿದ್ದು ಅದೇ
ಉತ್ತರ ಲೈಫ್
ಸ್ಟೈಲು .
ಇದರ ಬಾಲ ಇಡಿದು ಹೋದವರು
ಹುಡುಕುತಿದ್ರು ತಮ್ಮ
ಪುತ್ರಿಗೆ ವರ , ಜಾಹೀರಾತು
ನೀಡಿದ್ರು ಡಾಕ್ಟರ್, ಇಂಜಿನಿಯರ್ ಅದರಲ್ಲೂ ಸಾಫ್ಟ್ವೇರ್
ಇಂಜಿನಿಯರ್ ಆಗಿದ್ದಲಿ ಇನ್ನೂ ಉತ್ತಮ, ಹೀಗೆ
ಬಹಳಷ್ಟು ಬೇಡಿಕೆ ಮುಂದಿಟ್ಟು ಕೊನೆಯಲ್ಲಿ
ಹಾಕಿಸಿದ್ರು "ಹುಡುಗ ಯೋಗ್ಯ ನಾಗಿರ
ಬೇಕು". ಇದು ಇವರು ಕಂಡುಕೊಂಡ
ಲೈಫ್ ಸ್ಟೈಲು. ಹುಡುಕ
ಯೋಗ್ಯನಾಗಿರೋದಕಿನ್ನ ಮುಂಚೆ
ಡಾಕ್ಟರ್ ಅಥವಾ ಇಂಜಿನಿಯರ್ ಆಗಿರಬೇಕು.
ಪಾಪ ಜಾಹೀರಾತು ಓದಿದವರು
ಯಾರು ಕೊನೆ ಸಾಲು ಓದತಾರೆ
ಹೇಳಿ ? ರೀ ಇಲ್ಲಿ
ನೋಡ್ರಿ ಡಾಕ್ಟರ್ ವರ ಬೇಕಂತೆ,
ಇಂಜಿನಿಯರ್ ಬೇಕಂತೆ ಇಷ್ಟೇ ವಿಚಾರ.
ಹೆಣ್ಣನ್ನು ನೋಡಿ ಆಯ್ತು, ಮಧುವೇನು
ಆಯ್ತು, ಹುಡುಗಿಗೆ ಇಂಜಿನಿಯರ್ ಸಿಕ್ಕಿದ್ದ, ಕೊನೆಯಲ್ಲಿ ಹಾಕಿದ್ದ
ಜಾಹೀರಾತಿನ ಸಾಲು ಮಾತ್ರ ಅವನಿಗೆ
ವಿರುದ್ದವಾಗಿತ್ತು.
ಹೀಗೆ ಬಾಳ
ಸಂಗಾತಿಯನ್ನ ಹುಡುಕುತಿದ್ದ ಹುಡುಗ ನನಗಾದರೂ ಯಾರಿದ್ದಾರೆ
ಸಂಗಾತಿಯೊಬ್ಬಳು ಸಿಕ್ಕರೆ ಸಾಕು ಅನ್ನೋದು
ಅವನ ಯೋಚನೆಯಾಗಿತ್ತು, ಅದರಂತೆ ವರಿಸಿದ್ದ ಸುಂದರಿಯೊಬ್ಬಳನ್ನು. ಯವ್ವನದಲ್ಲಿ
ಸುಂದರವಾಗಿ ಕಂಡಿರಬೇಕು ಬಿಡಿ.
ದಿನ ಕಳೆದಂತೆ ಅವನಿಗೆ ಅನ್ನಿಸಿದ್ದು
ನಾ ಹುಡುಕಿದ್ದು ಬಾಳ ಸಂಗಾತಿಯನ್ನಲ್ಲ
ಒಂದು ಕೆಲಸವನ್ನ, ಅವನಿಗೆ ಬೇಕಾಗಿದ್ದು ಸಂಗಾತಿ
ಅವಳಿಗೆ ಬೇಕಿತ್ತು ಕೇರ್ ಟೇಕರ್. ದಿನ
ಕಳೆದಂತೆ ಸಂಗಾತಿಯ ಬೇಕು ಬೇಡಗಳನ್ನ
ಪೋರೈಸೋ ಯಂತ್ರವಾಗಿದ್ದ, ಪಾಪ ಅವಳಾದರು ಏನು
ಮಾಡತಾಳೆ ಹೇಳಿ ಅವನು ಹುಟ್ಟಿರೋದೇ
ನನಗೋಸ್ಕರ ಅನ್ನಕೊಂಡಿರತಾಳೆ!.
ಆದ್ರೂ ಅವಳು ಅವನ್ನ ತುಂಬ
ಕೇರ್ ಮಾಡತಿದ್ದಳು,ಅವಳಿಗೆ ಬೇಕಿತ್ತು ಬದುಕಿರೋ
ವರೆಗೂ ಒಬ್ಬ ಕೇರ್ ಟೇಕರ್.
ಆತ
ಎಲ್ಲರ ಬಗ್ಗೆ ಯೋಚಿಸ್ತಿದ್ದ ಎಲ್ಲರೂ
ಚೆನ್ನಾಗಿರಬೇಕು ಅಂತಿದ್ದ ,ಆದರೆ ಅವನ ಬಗ್ಗೆ
ಯೋಚನೆ ಮಾಡೋವ್ರು ಯಾರು ಹುಟ್ಟಿರಲಿಲ್ಲ...........
ಮಂಗುನು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ